ಪುಣೆಯಲ್ಲಿ ತುಳುಕನ್ನಡಿಗರ ೨೦ ಕ್ಕೂ ಹೆಚ್ಚು ಸಂಘಸಂಸ್ಥೆಗಳಿದ್ದರೂ ಪುಣೆಯಾದ್ಯಂತ ಇರುವ ತುಳುನಾಡ ಬಾಂಧವರನ್ನು ಭಾಷಿಕ ನೆಲೆಗಟ್ಟಿನಲ್ಲಿ ,ಸಾಂಸ್ಕೃತಿಕ ಭಾವೈಕ್ಯತೆಯ ಹಾದಿಯಲ್ಲಿ ಒಂದೇ ಛತ್ರದಲ್ಲಿ ಸೇರಿಸುವ ಸಂಸ್ಥೆಯೇ ಅದು " ತುಳುಕೂಟ ಪುಣೆ ". 21 ವರ್ಷಗಳ ಹಿಂದೆ ಮಹಾರಾಷ್ಟ್ರದ ಈ ಸಾಂಸ್ಕೃತಿಕ ನಗರಿ ಪುಣೆಯಲ್ಲಿರುವ ತುಳುನಾಡ ಬಾಂಧವರನ್ನು ಒಗ್ಗೊಡಿಸಲು ,ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಯಾವುದೇ ಧರ್ಮ, ಜಾತಿಗೆ ಸೀಮಿತವಾಗದೆ ಸಾಮಾಜಿಕವಾಗಿ ನಮ್ಮ ಅಸ್ಮಿತೆಯನ್ನು ಸಾರಲು ಜಯ ಕೆ ಶೆಟ್ಟಿಯವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಸಂಸ್ಥೆಯೇ ತುಳುಕೂಟ ಪುಣೆ . ನದಿಯೊಂದು ಉಗಮಿಸಿ ಹರಿಯುತ್ತಾ ತನ್ನ ಹರಿವನ್ನು ವಿಸ್ತರಿಸುತ್ತಾ ತನ್ನ ವಾಹಿನಿಯೊಳಗೆ ಅಗಾಧ ನೀರನ್ನು ಸೇರಿಸಿಕೊಂಡು ದೊಡ್ಡ ನದಿಯಾಗಿ ಹರಿದು ಸಾಗರವ ಸೇರಿದಂತೆ ಬೆರಳೆಣಿಕೆಯ ಸದಸ್ಯರಿಂದ ಆರಂಭಗೊಂಡ ತುಳುಕೂಟ ಬೆಳೆಯುತ್ತಾ ಇಂದು ಹಲವು ಏಳುಬೀಳುಗಳ ನಡುವೆಯೂ ಸಂಘವು ಹಂತ ಹಂತವಾಗಿ ಬೆಳವಣಿಗೆ ಹೊಂದುತ್ತಾ ಪುಣೆಯಲ್ಲಿಯೇ ಎಲ್ಲಾ ತುಳುನಾಡ ಬಾಂಧವರ ಅಭಿಮಾನದ ಸಂಸ್ಥೆಯಾಗಿ ರೂಪುಗೊಂಡಿದೆ . ಪ್ರತೀ ವರ್ಷ ವಾರ್ಷಿಕೋತ್ಸವದಲ್ಲಿ ಮೂರು ಸಾವಿರಕ್ಕೂ ಮಿಕ್ಕಿ ಜನ ಒಂದೇ ಛತ್ರದಲ್ಲಿ ಸೇರಿ ಜಾತ್ರೆಯಂತೆ ಸಂಭ್ರಮಿಸುತ್ತಿರುವುದು ಸಂಘದ ಯಶಸ್ಸಿಗೆ ಸಾಕ್ಷಿಯಾಗಿದೆ .
ಸುಮಾರು ಹದಿಮೂರು ವರ್ಷಗಳ ಕಾಲ ಜಯ ಕೆ ಶೆಟ್ಟಿಯವರ ಅಧ್ಯಕ್ಷತೆಯಲ್ಲಿಯೇ ಸಾಗಿದ ಸಂಸ್ಥೆಗೆ ಮಿಯ್ಯಾರ್ ರಾಜ್ ಕುಮಾರ್ ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರ ಸಂಘಕ್ಕೊಂದು ಹೊಸ ಆಯಾಮ ದೊರೆತು ಸಂಘದ ಸಾಮಾಜಿಕ ಸಾಂಸ್ಕೃತಿಕ ಚಿಂತನೆಗಳ ವ್ಯಾಪ್ತಿ ವಿಸ್ತಾರಗೊಳ್ಳುತ್ತಾ ಹೋಯಿತು .ಈ ಸಂದರ್ಭ ಸಂಘದ ಮಹಿಳಾ ವಿಭಾಗವನ್ನು ಹಾಗೂ ಪಿಂಪ್ರಿ ಚಿಂಚ್ವಾಡ್ ಪ್ರಾದೇಶಿಕ ಸಮಿತಿಯನ್ನು ರಚಿಸಲಾಯಿತು . ನಂತರದ ದಿನಗಳಲ್ಲಿ ತಾರಾನಾಥ ರೈ ಮೇಗಿನಗುತ್ತು ಅಧ್ಯಕ್ಷರಾಗಿ ಆಯ್ಕೆಗೊಂಡು ಸಂಘದ ಕಾರ್ಯಚಟುವಟಿಕೆಗಳಿಗೆ ಇನ್ನಷ್ಟು ವೇಗವನ್ನು ವೇಗವನ್ನು ತುಂಬುವ ಕಾರ್ಯವನ್ನು ಮಾಡಿದರು . ಕಳೆದ ಮೂರು ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಸಂಘದ ಪದಾಧಿಕಾರಿಗಳ ಸಹಕಾರದೊಂದಿಗೆ ಯುವ ಪೀಳಿಗೆಯನ್ನು ಸಂಘದೊಂದಿಗೆ ಬೆಸೆಯಲು ,ನಮ್ಮ ಆಚಾರ ,ವಿಚಾರ ,ಸಂಸ್ಕೃತಿ ,ಸಂಸ್ಕಾರ ,ಕಲಾಪ್ರಕಾರಗಳ ಅರಿವನ್ನು ಮೂಡಿಸುವಲ್ಲಿ ಭವಿಷ್ಯದಲ್ಲಿ ಸಂಘದ ಹಿತವರ್ಧನೆಗೆ ನೆರವಾಗುವಂತೆ ಯುವ ವಿಭಾಗವನ್ನು ಆರಂಭಿಸಿ ಪ್ರೋತ್ಸಾಹವನ್ನು ತುಂಬಿದರು . ಯುವ ವಿಭಾಗವು ಉತ್ಸಾಹಿ ನಾಯಕತ್ವದ ನ್ಯಾಯವಾದಿ ರೋಹನ್ ಪಿ ಶೆಟ್ಟಿಯವರ ನೇತೃತ್ವದಲ್ಲಿ ಆರಂಭಗೊಂಡು ಅತೀ ಕಡಿಮೆ ಅವಧಿಯಲ್ಲಿಯೇ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ಯುವ ಸಮೂಹವನ್ನು ಒಗ್ಗೊಡಿಸಿ ತುಳುನಾಡಿನ ಸಂಸ್ಕೃತಿಯ ಪರಿಚಯವನ್ನು ಮಾಡುವಲ್ಲಿ ಯಶಸ್ವಿಯಾಗಿದೆ . ಸುಮಾರು ನಲವತ್ತು ಸದಸ್ಯರನ್ನೊಳಗೊಂದು ಯುವ ವಿಭಾಗವು ಈಗಾಗಲೇ ಹಲವಾರು ಸಾಮಾಜಿಕ ಸಾಂಘಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಕ್ರಿಕೆಟ್ ಪಂದ್ಯಾಟ ,ವೃಕ್ಷಾರೋಹಣ ಕಾರ್ಯಕ್ರಮ ,ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಮುಂದಾದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿಭಾಯಯಿಸಿದೆ .
ಸಂಘವು ವರ್ಷವಿಡೀ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಪ್ರತೀ ವರ್ಷ ಆಗಸ್ಟ್ 15 ರಂದು ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿಜವಾದ ಉತ್ತಮ ಸಾಧಕರೊಬ್ಬರನ್ನು ಗುರುತಿಸಿ ಸಮ್ಮಾನಿಸುತ್ತಿದೆ . ಪ್ರತಿಭಾವಂತ ತುಳು ಕನ್ನಡಿಗ ವಿದ್ಯಾರ್ಥಿಗಳನ್ನು ಸತ್ಕರಿಸಿ ಪ್ರೋತ್ಸಾಹಿಸುತ್ತಿದೆ . ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ತುಳುನಾಡಿನ ಆಚಾರ ವಿಚಾರ ,ಸಂಸ್ಕೃತಿ ,ಸಂಸ್ಕಾರಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಮಾಡುತ್ತಿದೆ . ಯುವ ಪೀಳಿಗೆಗೆ ಉತ್ಸಾಹ ತುಂಬಲು ವಾರ್ಷಿಕ ಕ್ರೀಡಾಕೂಟದ ಆಯೋಜನೆ ,ನಮ್ಮ ಧಾರ್ಮಿಕ ನಂಬಿಕೆಗಳನ್ನು ಉಳಿಸಲು ದಸರಾ ಪೂಜೆ ,ಜನರ ಆರೋಗ್ಯದ ಬಗ್ಗೆಜಾಗೃತಿ ಮೂಡಿಸುವಲ್ಲಿ ರಕ್ತದಾನ ಶಿಬಿರದ ಆಯೋಜನೆ ,ಉಚಿತ ವೈದ್ಯಕೀಯ ತಪಾಸಣಾ ಶಿಬಿರ , ತುರ್ತು ಸಂದರ್ಭಗಳಲ್ಲಿ ಜನರಿಗೆ ನೆರವು ,ಅನಾರೋಗ್ಯಪೀಡಿತರಿಗೆ ನೆರವು ,ತುಳುನಾಡಿನ ಸಾಂಸ್ಕೃತಿಕ ಕಲಾಪ್ರಕಾರಗಳಾದ ,ಯಕ್ಷಗಾನ ,ನಾಟಕ ,ನೃತ್ಯ ಕಲಾವಿದರಿಗೆ ವೇದಿಕೆ ಒದಗಿಸುವುದು ,ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ,ಅನಾಥಾಶ್ರಮಗಳಿಗೆ ನೆರವು, ಅಂಗವಿಕಲರಿಗೆ ನೆರವು ,ಪುಣೆಯಲ್ಲಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಪ್ರೋತ್ಸಾಹ ಮುಂತಾಗಿ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ . ಸಂಘದ ಪಿಂಪ್ರಿ -ಚಿಂಚ್ವಾಡ್ ಪ್ರಾದೇಶಿಕ ಸಮಿತಿಯೂ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮುಂದಡಿಯಿಡುತ್ತಿದ್ದು ಸಂಘದ ಉದ್ದೇಶವನ್ನು ಸಾರ್ಥಕಗೊಳಿಸುವತ್ತ ಸಾಗುತ್ತಿದೆ . ಪುಣೆಯ ಹೃದಯವಂತ ದಾನಿಗಳ ಸಂಪೂರ್ಣ ಸಹಕಾರದೊಂದಿಗೆ ಸಂಘವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ .
ಪ್ರಸ್ತುತ ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್ ಬಿ ರೈ ಕರ್ನೂರು ,ಕೋಶಾಧಿಕಾರಿ ಸಂತೋಷ್ ಶೆಟ್ಟಿ ಎಣ್ಣೆಹೊಳೆ ,ಉಪಾಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ ,ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಶ್ರೀಧರ ಶೆಟ್ಟಿ ಕಲ್ಲಾಡಿ ,ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಮಾಣಿಬೆಟ್ಟು ,ಕ್ರೀಡಾ ಕಾರ್ಯಾಧ್ಯಕ್ಷ ಯಶವಂತ್ ಶೆಟ್ಟಿ ತಾಮಾರು ,ಪಿಂಪ್ರಿ ಚಿಂಚ್ವಾಡ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮ್ ಸುವರ್ಣ ,ಯುವ ವಿಭಾಗದ ಕಾರ್ಯಾಧ್ಯಕ್ಷ ರೋಹನ್ ಪಿ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿ ,ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸರ್ವ ಸದಸ್ಯರುಗಳ ಸಹಕಾರದೊಂದಿಗೆ ಸಂಘವು ಯಶಸ್ಸಿನ ಹಾದಿಯಲ್ಲಿ ಮುಂದುವರಿಯುತ್ತಿದೆ .
Contact UsTo impart and inculcate traditional values amongst our younger generation in the community and make them aware of the rich heritage of Tulunadu.
To impart and inculcate traditional values amongst our younger generation in the community and make them aware of the rich heritage of Tulunadu.
To impart and inculcate traditional values amongst our younger generation in the community and make them aware of the rich heritage of Tulunadu.
To impart and inculcate traditional values amongst our younger generation in the community and make them aware of the rich heritage of Tulunadu.